Friday, January 16, 2009

ನಾ ನಿನ್ನಲ್ಲಿ ಎಂದೆಂದಿಗೂ ಬಯಸುವ ಹಂಬಲ ಹೀಗಿದೆ

ಎಲ್ಲರು ಬಯಸುವರು
ನಿನ್ನ ನಗುವಾಗುವ ಹಂಬಲ
ಆದರೆ ನಾ ಬಯಸುವೆ
ನಗುವಿನ ಕಾರಣವಾಗುವ ಹಂಬಲ!

ಎಲ್ಲರು ಬಯಸುವರು
ನೀ ಮುಡಿವ ಮಲ್ಲಿಗೆಯಾಗುವ ಹಂಬಲ
ಆದರೆ ನಾ ಬಯಸುವೆ
ಮಲ್ಲಿಗೆಯ ಪರಿಮಳವಾಗುವ ಹಂಬಲ!

ಎಲ್ಲರು ಬಯಸುವರು
ನಿನ್ನ ಸುಖದಲ್ಲಿ ಭಾಗಿಯಾಗುವ ಹಂಬಲ
ಆದರೆ ನಾ ಬಯಸುವೆ
ಸುಖದಲ್ಲಿ ನನ್ನ ನೆನಪುಲಿಸುವ ಹಂಬಲ!

ಎಲ್ಲರು ಬಯಸುವರು
ನಿನ್ನ ಸ್ನೇಹವನ್ನು ಹೊಂದುವ ಹಂಬಲ
ಆದರೆ ನಾ ಬಯಸುವೆ
ಸ್ನೇಹವನ್ನು ಶಾಶ್ವತವಗಿರಿಸುವ ಹಂಬಲ!

ಎಲ್ಲರು ಬಯಸುವರು
ನೀ ಚಿರಕಾಲ ಬದುಕಬೇಕೆಂಬ ಹಂಬಲ
ಆದರೆ ನಾ ಬಯಸುವೆ
ನಿನ್ನ ಬದುಕಿಗೆ ನನ್ನ ಕಾಲವನ್ನೇ ಮುಡಿಪಾಗಿಡುವ ಹಂಬಲ!

ಎಲ್ಲರು ಬಯಸುವರು
ಕೊನೆಯವರೆಗೂ ನಿನ್ನ ಜೊತೆಯಿರಬೇಕೆಂಬ ಹಂಬಲ
ಆದರೆ ನಾ ಬಯಸುವೆ
ನಿನ್ನ ಕಣ್ಣೆದುರು ನನ್ನ ಕಣ್ಣು ಮುಚ್ಚಬೇಕೆಂಬ ಹಂಬಲ!


1 comment:

  1. Hi brother your HNIGVAVAS are very meaning full and I like them. Best of luck.

    Thank you,
    Kalpana

    ReplyDelete